International Journal of Multidisciplinary Futuristic Development

ಕರಾವಳಿಯಿಂದ ಸಬಲೀಕರಣದ ದಿಗಂತದೆಡೆಗೆ: ಸಾಮಾಜಿಕ ಪರಿವರ್ತನೆಯ ಪಥ

Dr. Shaila K.N1

  1. 1
Version of record

This is an author-deposited copy. The version of record was originally published elsewhere: Originally published in International Journal of Multidisciplinary Futuristic Development, Volume 6, Issue 2, 2025. DOI 10.54660/IJMFD.2025.6.2.171-174 . Original source: https://www.transdisciplinaryjournal.com/archives/year-2025.vol-6.issue-2.

Abstract

ಪಾಶ್ಚಿಮಾತ್ಯ ಸಂಸ್ಕೃತಿಯೊಂದಿಗೆ ಸಂಪರ್ಕ ಬೆಳೆದ ಪರಿಣಾಮಗಳಿಂದ ಪ್ರಭಾವಿತರಾದ ಹಲವಾರು ಬೌದ್ಧಿಕ ವ್ಯಕ್ತಿಗಳಲ್ಲಿ ಲೋಕತಾಂತ್ರಿಕ ಮತ್ತು ಉದಾರನೀತಿಗಳ ಬಗ್ಗೆ ಹೊಸ ಅರಿವು ಮೂಡತೊಡಗಿತು. ಅದರಿಂದ ಉಂಟಾದ ಬದಲಾವಣೆಗಳ ಸಮಗ್ರ ಪರಿಣಾಮಗಳು ಭಾರತ ದೇಶದ ಸಾಮಾಜಿಕ ಜೀವನದ ಮೇಲೆ ಸ್ಥಾನವಾಗಿ ಆದರೆ ಸ್ಥಿರವಾಗಿ ಕಾಣಿಸಿಕೊಳ್ಳತೊಡಗಿತು.¹ ಆದರೆ ಬ್ರಿಟಿಷ್ ಆಡಳಿತದ ಅವಶ್ಯಕತೆಗಳನ್ನು ಪೂರೈಸುವ ಹಿನ್ನೆಲೆಯಲ್ಲಿಯೇ ಬ್ರಿಟಿಷ್ ಮಾದರಿಯ ಆಧುನಿಕತೆ ಅಥವಾ ಅಭಿವೃದ್ಧಿ ಜಾರಿಗೆ ಬಂತು.² ವಸಾಹತುಶಾಹಿ ಆಡಳಿತದ ಸಂದರ್ಭದಲ್ಲಿ ಭಾರತೀಯ ಸಮಾಜದಲ್ಲಿ ಬೇರುಬಿಟ್ಟಿದ್ದ ಅನೇಕ ಸಾಮಾಜಿಕ ಅನಿಷ್ಟ ಪದ್ಧತಿಗಳು, ಅಸಮಾನತೆಗಳು ಮತ್ತು ಸಾಂಪ್ರದಾಯಿಕ ನಿರ್ಬಂಧಗಳ ವಿರುದ್ಧ ಸಮಾಜ ಸುಧಾರಣಾ ಚಳುವಳಿಗಳು ರೂಪುಗೊಂಡವು. ಈ ಸಮಾಜ ಸುಧಾರಣಾ ಚಳುವಳಿಗಳ ಪ್ರಮುಖ ಆಶಯಗಳಲ್ಲಿ ಮಹಿಳೆಯರ ಶಿಕ್ಷಣ, ಸಾಮಾಜಿಕ ಸ್ಥಾನಮಾನ, ಸ್ವಾತಂತ್ರ್ಯ ಹಕ್ಕುಗಳು ಹಾಗೂ ಗೌರವಯುತ ಬದುಕಿಗೆ ಅವಕಾಶ ಕಲ್ಪಿಸುವುದು ಪ್ರಮುಖವಾಗಿತ್ತು. ಈ ಹಿನ್ನೆಲೆಯಲ್ಲಿ ಸ್ಥಳೀಯ ಮಟ್ಟದಲ್ಲಿ ಶ್ರಮಿಸಿದ ಹಲವು ಸಮಾಜ ಸುಧಾರಕರು, ಧಾರ್ಮಿಕ ಹಾಗೂ ಸಾಮಾಜಿಕ ಚಿಂತಕರು ಮತ್ತು ಸಂಘಟಕರು ಮಹತ್ವದ ಪಾತ್ರ ವಹಿಸಿರುವುದು ಗಮನಾರ್ಹವಾಗಿದೆ. ತನ್ನ ವಿಶಿಷ್ಟ ಸಾಮಾಜಿಕ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಪರಂಪರೆಯಿಂದಾಗಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯು ಕರ್ನಾಟಕದ ಇತರ ಪ್ರದೇಶಗಳಿಗಿಂತ ವಿಭಿನ್ನವಾದ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದೆ. ಆಧುನಿಕ ಶಿಕ್ಷಣದ ವಿಸ್ತರಣೆ, ಮುದ್ರಣ ಮಾಧ್ಯಮದ ಬೆಳವಣಿಗೆ, ಕ್ರೈಸ್ತ ಮಿಷನರಿಗಳ ಶೈಕ್ಷಣಿಕ ಚಟುವಟಿಕೆಗಳು, ಸ್ಥಳೀಯ ಸಂಘ-ಸಂಸ್ಥೆಗಳ ಸ್ಥಾಪನೆ ಹಾಗೂ ರಾಷ್ಟ್ರೀಯ ಚಳುವಳಿಯ ಪ್ರಭಾವಗಳು ಮಹಿಳೆಯರ ಸಾಮಾಜಿಕ ಸ್ಥಿತಿಗತಿಗಳ ಕುರಿತು ಹೊಸ ಚರ್ಚೆಗಳಿಗೆ ಅವಕಾಶ ಕಲ್ಪಿಸಿದವು. ಈ ಲೇಖನವು ಆಯ್ದ ಸಮಾಜ ಸುಧಾರಕರು ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ಕೈಗೊಂಡ ವಿವಿಧ ಸುಧಾರಣಾ ಕಾರ್ಯಗಳು ಹಾಗೂ ಮಹಿಳೆಯರ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಪ್ರಗತಿಗೆ ಅವರು ನೀಡಿದ ಕೊಡುಗೆಗಳನ್ನು ಐತಿಹಾಸಿಕ ನೆಲೆಯಲ್ಲಿ ವಿಶ್ಲೇಷಿಸುತ್ತದೆ.  

Keywords: ಸಾಮಾಜಿಕ ಜಾಗೃತಿಸಮಾಜ ಸುಧಾರಕರುಸುಧಾರಣೆಗಳುಮಹಿಳಾ ಸಬಲೀಕರಣಶಿಕ್ಷಣ

How to cite

Licensed under CC BY 4.0.